Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಮೊದಲ ಮಿಂಚು` ಮೊದಲ ಪ್ರತಿ ಸಿದ್ಧ
Posted date: 09 Wed, May 2012 ? 08:23:48 AM

ಹೊಸ ದಾಖಲೆಯನ್ನು ಹುಟ್ಟು ಹಾಕಿರುವ ವೆಸ್ಲೀ ಬ್ರೌನ್ ಅವರ ’ಮೊದಲ ಮಿಂಚು’ ಮೊದಲ ಪ್ರತಿಯನ್ನು ಮುಂಬೈನ ಸ್ಟುಡಿಯೋ ಒಂದರಲ್ಲಿ ಸಿದ್ದಪಡಿಸಿಕೊಂಡು ಸದ್ಯದಲ್ಲೇ ಸೆನ್ಸಾರ್ ಬಳಿಗೆ ಬರಲು ಸಿದ್ದವಾಗುತ್ತಿದೆ. ಈ ಚಿತ್ರಕ್ಕೆ ೧೫ ದಿವಸಗಳ ರಿರೇಕಾರ್ಡಿಂಗ್ ಹಾಗೂ ಮಿಕ್ಸಿಂಗ್ ಕೆಲಸ ಮಾಡಲಾಗಿದೆ.

ಚಿತ್ರರಂಗದ ಇತಿಹಾಸದಲ್ಲೇ ವೆಸ್ಲೀ ಬ್ರೌನ್ ಪ್ರಥಮ ಪ್ರಯತ್ನದಲ್ಲಿ ೮ ವಿಭಾಗಗಳಲ್ಲಿ ಕೆಲಸ ಮಾಡಿ ತಾವೊಂದು ವಿಶ್ವ ದಾಖಲೆ ಮಾಡಿರುವುದಾಗಿ ಹೇಳಿಕೊಳ್ಳುವ ’ಮೊದಲ ಮಿಂಚು’ ಚಿತ್ರಕ್ಕೆ
ಕತೆ, ಚಿತ್ರಕತೆ, ಸಂಭಾಷಣೆ, ಛಾಯಾಗ್ರಹಣ, ಸಂಗೀತ, ನೃತ್ಯ, ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಇವರು ನಾಲ್ಕೂವರೆ ನಿಮಿಷದ ಹಾಡೊಂದನ್ನು ಒಂದೇ ಟೇಕ್‌ನಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿ ಸೆರೆಹಿಡಿದಿದ್ದಾರೆ.

ಚಿತ್ರದ ಕಥಾನಾಯಕ ಹೇಮಂತ್ ಹಾಗೂ ನಾಯಕಿ ಸುಪ್ರಿತಾ. ಸಾಧು ಕೋಕಿಲಾ, ದೊಡ್ಡಣ್ಣ ಹಾಗೂ ಇನ್ನಿತರರು ಈ ವಿನೂತನ ಚಿತ್ರದಲ್ಲಿ ಅಭಿನಯಿಸಿದ್ದಾರೆ.  

ಇದೇ ತಿಂಗಳ ೨೫ ಅಥವಾ ಜೂನ್ ಮೊದಲ ವಾರದಲ್ಲಿ ’ಮೊದಲ ಮಿಂಚು’ ಪ್ರೇಕ್ಷಕರ ಎದುರು ಬರಲು ವೆಸ್ಲೀ ಬ್ರೌನ್ ಆಸೆ ಪಟ್ಟಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಮೊದಲ ಮಿಂಚು` ಮೊದಲ ಪ್ರತಿ ಸಿದ್ಧ - Chitratara.com
Copyright 2009 chitratara.com Reproduction is forbidden unless authorized. All rights reserved.